ಆತ್ಮೀಯರೆ,
ಸಾಲು ಸಾಲು ರಜೆ, ದೀಪಾವಳಿಯ ಹಬ್ಬದ ವಾತಾವರಣದ ಬೆನ್ನಲ್ಲೇ ಮತ್ತೆ ಬರುತ್ತಿದೆ ಕನ್ನಡ ರಾಜ್ಯೋತ್ಸವ.
ಎಂದಿನಂತೆ ನಮ್ಮದು ಅದೇ ವ್ಯಥೆ. ಪರಭಾಷಿಕರು ಕನ್ನಡ ಕಲಿಯುತ್ತಿಲ್ಲ, ಕನ್ನಡ ಭಾಷೆಯೆಂದರೆ ತಿರಸ್ಕಾರ, ಕನ್ನಡಕ್ಕೆ ಉಳಿಗಾಲವಿಲ್ಲ ಇತ್ಯಾದಿ.
ಇವತ್ತಿನ (28, ಅಕ್ಟೋಬರ್) 'ಹಿಂದು' ಪತ್ರಿಕೆಯಲ್ಲಿ ಅಕ್ಷರ ಕೆ. ವಿ ಅವರ ಅಭಿಪ್ರಾಯವನ್ನು ಓದಿದರೆ ಅಂಥ ಭಯವೇನೂ ಬೇಕಿಲ್ಲ. ಕನ್ನಡ ಭಾಷೆಗೆ ಯಾವ ಧಕ್ಕೆಯೂ ಇಲ್ಲ. ಕನ್ನಡ ಭಾಷೆಯ ನಿಜವಾದ ಅಸ್ತಿತ್ವವಿರುವುದು ನಗರಗಳ ಹೊರತಾದ ಪ್ರದೇಶಗಳಲ್ಲಿ, ಹಳ್ಳಿಗಾಡುಗಳಲ್ಲಿ. ಅಲ್ಲಿ 'ಕನ್ನಡ' ಜೀವನದಲ್ಲಿ ಹಾಸುಹೊಕ್ಕಾಗಿದೆ. ಕನ್ನಡವನ್ನು, ಕನ್ನಡತನವನ್ನು ಹುಡುಕಬೇಕಿಲ್ಲ. ಕನ್ನಡ ಭಾಷೆಯ ಅಸ್ತಿತ್ವದ ಬಗ್ಗೆ ಚಿಂತೆ ಅಗತ್ಯವಿಲ್ಲ.
ಮನಸ್ಸಿಗೆ ಖುಷಿಯೆನಿಸುವ ಈ ಭಾವದೊಡನೆ ಈ ಬಾರಿಯ ರಾಜ್ಯೋತ್ಸವದ ಸಂದರ್ಭದಲ್ಲಿ, ನಿಮ್ಮ ಪರಭಾಷಾ ಸ್ನೇಹಿತರಲ್ಲಿ ಸಾಹಿತ್ಯಾಸಕ್ತರು ಇದ್ದಲ್ಲಿ, ಕನ್ನಡ ಸಾಹಿತ್ಯದ ಬಗ್ಗೆ ಕಿರು ಪರಿಚಯ ಒದಗಿಸಲು ನೀವು ನೀಡಬಹುದಾದ ಸೂಕ್ತವಾದ ಉಡುಗೊರೆ ಈ ಕೆಳಗಿನ ಪುಸ್ತಕ:
ಕಳೆದ ಎರಡು ದಶಕಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಮೂಡಿ ಬಂದ ವಿವಿಧ ಲೇಖಕರ ಕೃತಿಗಳ ಇಣುಕು ನೋಟ ವಿವೇಕ್ ಶಾನಭಾಗರ ಇಂಗ್ಲಿಷ್ ಭಾಷಾ ಕೃತಿ 'ಸಿರಿಗನ್ನಡ' ದಲ್ಲಿ ಲಭ್ಯವಿದೆ.
ಕೇವಲ ಮಾತನಾಡಲಷ್ಟೇ ಕನ್ನಡ ಅರಿತಿರುವ ಕನ್ನಡಿಗರಿಗೂ ಕನ್ನಡ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಲು ಇದು ಸೂಕ್ತವಾದ ಹೊತ್ತಿಗೆ.
ಆಕೃತಿಯ ಅಂತರ್ಜಾಲ ಪುಸ್ತಕ ಮಳಿಗೆಯಲ್ಲಿ ಲಭ್ಯವಿದೆ: http://akrutibooks.com/product/sirigannada
ಪುಸ್ತಕದ ಕಿರು ಪರಿಚಯಕ್ಕಾಗಿ ಈ ಕೊಂಡಿಯನ್ನು ನೋಡಿ:http://www.hindu.com/br/2011/03/22/stories/2011032250201500.htm
ಧನ್ಯವಾದಗಳು,
ರಾಧಿಕಾ
No comments:
Post a Comment